ಹಿಂದೂ ಮನೆಯ ಸಂಕೇತಗಳು - ವೈಜಜ್ಞಾನಿಕ ನೋಟ
ಇಲ್ಲಿ ನಾವು ಪ್ರತಿಯೊಂದು ಚಿಕ್ಕ-ಚಿಕ್ಕ ಆಚಾರಗಳ ಕುರಿತಾಗಿಯೂ ಕೂಡ ವೈಜ್ಞಾನಿಕವಾಗಿ ಒಂದು ಸಣ್ಣ ಪಕ್ಷಿನೋಟ ನೋಡುವುದರಲ್ಲಿ ತಪ್ಪು ಇಲ್ಲ ಎಂದು ಕಾಣುತ್ತದೆ. ನಾವು ಪಾಲಿಸುತ್ತಿರುವ ಆಚಾರಗಳ ಕುರಿತು ನಮಗೆ ಸ್ಪಷ್ಟತೆ ಇರುವುದರಲ್ಲಿ ಪಾರ್ಣ ಅರ್ಥವಿದೆ. ಹಾಗಾಗಿ ನಾವು ತುಳಸೀ ಸ್ಥಾಪನೆಯ ಕುರಿತು ಸ್ವಲ್ಪವಾಗಿ ಅರಿತಿದ್ದೇವೆ. ಈಗ ಇತರೆ ವಿಚಾರಗಳ ಕುರಿತು ತಿಳಿಯೋಣ.
ವೇದಮಂತ್ರ ಮತ್ತು ಶಂಖಧ್ವಾನ :
ಸದಾ ಕೃಷ್ಣನ ಕೈಯಲ್ಲಿ ವಿರಾಜಮಾನವಾಗಿರುವ ಶಂಖನೋಡಲು ಬಹಳ ನಯನ ಮನೋಹರ. ನಮ್ಮ ಮನುಕುಲದ ಪರಂಪರೆಯಲ್ಲಿ ಶಂಖಕ್ಕೆ ಬಹಳ ಮಹತ್ವದ ಪಾತ್ರವಿದೆ. ಪ್ರತಿಯೊಂದು ಶುಭಕಾರ್ಯದಲ್ಲಿ, ಯುಧ್ಧದಲ್ಲಿ, ಸಂಭ್ರಮಾಚರಣೆಗಳಲ್ಲಿ ನಾವು ಶಂಖದ ನಾದವನ್ನು ಮಾಡುತ್ತೇವೆ.
ಕೆಲವರು ಯೋಚಿಸಬಹುದು; ಈ ಸಂಪ್ರದಾಯಗಳೆಲ್ಲ ಏಕೆ? ಬರೀ ತೋರಿಕೆಗಾಗಿಯೇ? ಅಥವಾ ಇವೆಲ್ಲವೂ ಬೂಟಾಟಿಕೆಗಾಗಿಯೇ? ಇವೆಲ್ಲವೂ ಅರ್ಥವಿಲ್ಲದ ಅನರ್ಥಕಾರ್ಯಗಳೇ? ಖಂಡಿತವಾಗಿಯು ಅಲ್ಲ. ಇದರ ಹಿಂದೆ ಉತ್ತಮ ವಿಚಾರ ಧಾರೆ ಹಾಗೂ ವೈಜ್ಞಾನಿಕತೆ ಅಡಗಿದೆ.
ನಾವು ಶಂಖ ಊದಿದಾಗ ಅದರ ನಾದ ತರಂಗಗಳು ಹೊರಹೊಮ್ಮಿ ಎಲ್ಲೆಡೆಯು ಹರಡಿ ವಾತಾವರಣ ಮತ್ತು ಮನಸ್ಸನ್ನು ತಿಳಿಗೊಳಿಸುತ್ತದೆ. ಈ ತರಂಗಗಳು ಬಹಳ ವೈಜ್ಞಾನಿಕವಾದ ಅನುಪಾತದಲ್ಲಿ (Scientific and Sequential Manner) ಸೃಷ್ಟಿಯಾಗುತ್ತವೆ. ಈ ತರಂಗಗಳು (Waves) ಮನಸನ್ನು ಪ್ರಶಾಂತವಾಗಿರಿಸಲು ಸಹಾಯವಾಗುತ್ತವೆ. ಈ ಶಂಖವನ್ನು ದೇವಸ್ಥಾನಗಳಲ್ಲಿ ತಪ್ಪದೆ ಊದುತ್ತಾರೆ. ಕಾರಣ ಚಂಚಲವಾದ ಮನಸ್ಸು ಯಾವಕಡೆಯು ಚದರಿಹೋಗದೆ ಒಂದರೆಕ್ಷಣವಾದರೂ ದೇವರೆಡೆಗೆ ಮುಖಮಾಡುತ್ತದೆ. ಶಂಖವನ್ನು ಕಿವಿಗೆ ಹತ್ತಿರವಾಗಿರಿಸಿದಾಗ ಅದರಿಂದ ಹೊರಡುವ ತರಂಗಗಳು ಮಾನವನ ಶರೀರದಲ್ಲಿ ಕಂಪನಾಂಕವನ್ನು ಉಂಟುಮಾಡುತ್ತದೆ. ಇದರಿಂದ ಮಾನವನ ಶರೀರವಿಡೀ ಉತ್ತೇಜನಕ್ಕೊಳಗಾಗಿ ಉಲ್ಲಾಸವನ್ನುಂಟುಮಾಡುತ್ತದೆ. ಇದು ವೈಜ್ಞಾನಿಕತೆಯಲ್ಲವೆ?
ಅಷ್ಟೇ ಅಲ್ಲದೆ ತುಳಸೀ ತೀರ್ಥವನ್ನು ಸೇವಿಸಿದಂತೆ ಶಂಖದ ತೀರ್ಥವನ್ನು ನೀರಿನಲ್ಲಿ ಬೆರೆಸಿ ಕೊಡುತ್ತಾರೆ. ಕಾರಣವೇನೆಂದು ತರ್ಕದ ದೃಷ್ಟಿಯಿಂದ ನೋಡಿದರೆ ಇದರಲ್ಲಿ ಅಡಗಿರುವ ವೈಜ್ಞಾನಿಕತೆ ಕಂಡುಬರುತ್ತದೆ.